ರುದ್ರಮುನಿ
ಸು.12ನೆಯ ಶತಮಾನ.ವೀರಶೈವಧರ್ಮದ ಪುನರು ಜ್ಜೀವನದ ಸಂದರ್ಭದಲ್ಲಿ ಮಹತ್ತರ ಪಾತ್ರವಹಿಸಿದ ಮಹಾಪುರುಷ.ರೇವಣಸಿದ್ಧರ ಔರಸ ಪುತ್ರ. ಇವನ ವಿದ್ಯಾಭ್ಯಾಸ ಕಲ್ಯಾಣ ಪಟ್ಟಣದಲ್ಲಿ ನಡೆಯಿತು.ಎಂಟನೆಯ ವರ್ಷದಲ್ಲಿ ವೀರಶೈವ ದೀಕ್ಷೆ ಪಡೆದ.ಪ್ರಭವಂಶೋದ್ಭವರಾದ ಗುರುಲಿಂಗಣಾಚಾರ್ಯರಿಂದ ಈತನಿಗೆ ಷಟ್ಸ್ಥಲ ಜ್ಞಾನೋದಯವಾಯಿತು.ಇವನಿಗೆ ಅನುಗ್ರಹ ದೀಕ್ಷೆಯೂ ಆಗಿತ್ತು.ಈ ದೀಕ್ಷೆಯ ಅನಂತರ ಈತ ರುದ್ರಮುನಿದೇವರು ಎಂಬ ಹೆಸರು ಪಡೆದ.ರಂಭಾಪುರಿ ಪೀಠದ ಪೀಠಾಧಿಪತಿಯಾಗಿದ್ದರು.ಚರಪಟ್ಟಾಧಿಕಾರಿಯಾಗಿದ್ದು ರೇವಣಸಿದ್ಧರ ಆಜ್ಞೆಯ ಮೇರೆಗೆ ಅದನ್ನು ತ್ಯಜಿಸಿದ.ಚನ್ನಬಸವೇಶ್ವರನ ತರುವಾಯ ಶೂನ್ಯಸಿಂಹಾಸನದ ಅಧಿಕಾರವನ್ನು ವಹಿಸಿಕೊಂಡಿದ್ದ.ಈತ ಶ್ರೀಶೈಲದಲ್ಲಿ ಸಿಂಹಾಸನ ಮಠವನ್ನು ಕಟ್ಟಿಸಿದನೆಂದೂ ಕಾಲಜ್ಞಾನ (1202) ಎಂಬ ಗ್ರಂಥವನ್ನು ಬರೆದಿರುವನೆಂದೂ ತಿಳಿದುಬರುತ್ತದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ